Kannada Actor Kiccha Sudeep has taken his twitter account to react about his haters. For more information watch this vidoe
ಜನಪ್ರಿಯತೆ ಎಲ್ಲಿರುತ್ತೋ, ಅಲ್ಲಿ ವಿವಾದಗಳೂ ಅಂಟಿಕೊಂಡಿರುತ್ತೆ. ಒಬ್ಬ ಸ್ಟಾರ್ ನಟನಿಗೆ ಎಷ್ಟು ಅಭಿಮಾನಿಗಳು ಇರುತ್ತಾರೋ, ಅಷ್ಟೇ ವಿರೋಧಿಗಳು ಕೂಡ ಇರುತ್ತಾರೆ. ಸ್ಟಾರ್ ಗಳ ನಡುವೆ 'ಸ್ಪರ್ಧೆ' ಇಲ್ಲ ಅಂದ್ರೂ, ಅಭಿಮಾನಿಗಳು ಮಾತ್ರ 'ನಮ್ಮ ಬಾಸ್ ಮೇಲು' ಎಂದು ಅಭಿಮಾನದ ಪರಾಕಾಷ್ಟೆಯ ಪ್ರದರ್ಶನ ಮಾಡುತ್ತಿರುತ್ತಾರೆ.
ಅತಿರೇಕದ ಅಭಿಮಾನದಿಂದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸ್ಟಾರ್ ನಟರ ಅಭಿಮಾನಿಗಳ ನಡುವೆ ಯುದ್ಧಗಳೇ ನಡೆದು ಹೋಗಿವೆ. ಅದೆಷ್ಟೋ ಬಾರಿ ಕಾಮೆಂಟ್ ವಾರ್ ಕೂಡ ಜರುಗಿವೆ. 'ದಯವಿಟ್ಟು ನಮ್ಮ ನಮ್ಮ ನಡುವೆ ತಂದಿಡ್ಬೇಡಿ' ಎಂದು ಸ್ಟಾರ್ ನಟರೇ ಅಭಿಮಾನಿಗಳಲ್ಲಿ ಕೈಮುಗಿದು ಪರಿಪರಿಯಾಗಿ ಬೇಡಿಕೊಂಡ್ಮೇಲೆ, ಎಲ್ಲರೂ ಸ್ವಲ್ಪ ಕೂಲ್ ಆಗಿದ್ದಾರೆ.ಅಸಲಿಗೆ, ಸ್ಟಾರ್ ನಟರ ಅಭಿಮಾನಿಗಳ ನಡುವಿನ ಕಿತ್ತಾಟದ ಬಗ್ಗೆ ನಾವು ಇಷ್ಟೆಲ್ಲ ಹೇಳಲು ಕಾರಣ ಕಿಚ್ಚ ಸುದೀಪ್ ಮಾಡಿರುವ ಒಂದು ಟ್ವೀಟ್. ಅದರ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ.
ಕಿಚ್ಚ ಸುದೀಪ್ ರವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಸಾಮಾಜಿಕ ಜಾಲತಾಣಗಳಲ್ಲಂತೂ ಕಿಚ್ಚ ಸುದೀಪ್ ಗೆ ಹೆಚ್ಚು ಹಿಂಬಾಲಕರು ಇದ್ದಾರೆ. ಹಾಗೇ, ಸುದೀಪ್ ಗೆ ಕೆಲ ವಿರೋಧಿಗಳು ಕೂಡ ಇದ್ದಾರೆ. ಅಂತಹ ವಿರೋಧಿಗಳಿಗೆ ಸುದೀಪ್ ಏನು ಹೇಳಿದ್ದಾರೆ ಗೊತ್ತಾ.?
''ಬೇರೆ ನಟರ ಅಭಿಮಾನಿಗಳು ನಿಮ್ಮನ್ನು ದ್ವೇಷಿಸುವುದರ ಜೊತೆಗೆ ನಿಮ್ಮ ಕುರಿತು ನೆಗೆಟಿವ್ ರೂಮರ್ಸ್ ಹಬ್ಬಿಸುತ್ತಾರೆ. ಇಂಥವರ ಮಧ್ಯೆ ನೀವು ಸಾಕಷ್ಟು ಜನರ ಪ್ರೀತಿ ಗಳಿಸಿದ್ದೀರಿ. ಇದು ಹೇಗೆ ಸಾಧ್ಯ'' ಎಂದು ಅಭಿಮಾನಿಯೊಬ್ಬರು ಕಿಚ್ಚ ಸುದೀಪ್ ರವರಿಗೆ ಟ್ವಿಟ್ಟರ್ ನಲ್ಲಿ ಪ್ರಶ್ನೆ ಕೇಳಿದ್ದರು.
''ನಾನು ಕೆಲಸ ಮಾಡುವುದನ್ನಷ್ಟೇ ಕಲಿತಿದ್ದೇನೆ. ಪ್ರೀತಿ ಮಾಡುವ ಅಧಿಕಾರ ಇರುವವರು, ದ್ವೇಷಿಸುವ ಹಕ್ಕನ್ನೂ ಹೊಂದಿರುತ್ತಾರೆ. ಇವೆರಡನ್ನೂ ನಾನು ಸಮನಾಗಿ ಸ್ವೀಕರಿಸುತ್ತೇನೆ'' ಎಂದು ಅಭಿಮಾನಿಯ ಪ್ರಶ್ನೆಗೆ ಸುದೀಪ್ ನೇರವಾಗಿ ಉತ್ತರ ಕೊಟ್ಟಿದ್ದಾರೆ.
ಪ್ರೀತಿಸುವವರು ಇದ್ದಾರೆ ಎಂಬ ಕಾರಣಕ್ಕೆ ಹಿಗ್ಗದೆ, ದ್ವೇಷಿಸುವವರು ಇದ್ದಾರೆ ಎಂಬ ಕಾರಣಕ್ಕೆ ಕುಗ್ಗದೆ, ಎಲ್ಲವನ್ನೂ ಸಮನಾಗಿ ಸ್ವೀಕರಿಸಿ ತಮ್ಮ ಕೆಲಸವನ್ನ ಶ್ರದ್ದೆಯಿಂದ ಮಾಡುತ್ತಿರುವ ಸುದೀಪ್ ಹಲವರ ಪಾಲಿಗೆ ರೋಲ್ ಮಾಡೆಲ್.